Adhishakthyathmaka Sri Annapoorneshwari Ammanavara Temple, SriKshetra Horanadu - 577 181, Chickmagalore

 

Darshana Rules & Regulations

 1. Before visiting to shri kshetra get medical checkup done.
 2. Darshan Timing- 7:00 am to 7:00 pm
 3. Below 10 yrs and above 65 yrs aged persons are not allowed.
 4. Book the online Darshana Ticket through our website www.srikshetrahoranadu.com before visiting shrikshetra horanadu. The Darshana ticket is Free of cost.
 5. Printout of the Darashana ticket is compulsory.
 6. Report 1 hour before to your Darasahan time.
 7. If reported late after the allotted Darshana time entry will be restricted. A fresh Darshana ticket has to be taken from temple website www.srikshetrahoranadu.com or form the Darshana ticket counter available at temple.
 8. Without mask entry is prohibited.
 9. Thermal screening is compulsory.
 10. If any one of the devotee in a group is found to have COVID -19 symptoms while thermal screening entry will be restricted to all of the devotees in the group.
 11. Devotees coming in own, rented vehicle or by bus if the driver or the conductor or any one among them in that vehicle is found to have COVID -19 symptoms while thermal screening entry will be restricted to all of them.
 12. Social distancing of 6 feet difference is compulsory all the time.
 13. Entry to the temple premises is allowed only once as per your Darshana timings. Have the Darshana and
  Prasada Boajan and exit the temple premises.
 14. If re-entry is required get a fresh ticket from temple website www.srikshetrahoranadu.com or form the ticket counter available at temple.
 15. Please buy the seva tickets at the seva counters before entering the temple.
 16. For all the sevas the priest will perform the sankalpa, archana, pooja and samarpan on behalf of the devotee.
 17. Any material offerings have to be put in the designated place which will be sanitized and later offered to the god by the temple employees.
 18. No articles or items allowed inside the main temple hall.
 19. No devotee will be allowed inside the main temple hall at the time of mahamangalarati.
 20. At the prasada counter only devotee with the seva ticket is allowed.
 21. At the prasadabojana hall maintaining social distancing of 6 feet is compulsory.
 22. After having the prasada bojana the devotees are requested to wash the plates by themselves and keep it at the
  designated place.
 23. All the above mentioned rules to be followed without fail.

MAHAMANGALARATI TIMING
Morning- 09: 00 am
Afternoon – 01:00 pm
Night- 08:00 pm

God forbid if any of the devotees visiting the temple is affected by COVID -19 the temple authority is not responsible for it. The whole and sole liability lies on the devotee himself.

All the devotees are requested to take care of their health and adhere to the safety procedures mentioned above and
cooperate with the temple employees to provide a hassle free Darshan to all.


 1. ಶ್ರೀಕ್ಷೇತ್ರಕ್ಕೆ ಬರುವ ಮೊದಲು ಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬರಬೇಕು.
 2. ಶ್ರೀಕ್ಷೇತ್ರಕ್ಕೆ ಬರುವರು ಮುಂಚಿತವಾಗಿ ಶ್ರೀಕ್ಷೇತ್ರದ ವೆಬ್ಸೈಟ್ srikshetrahoranadu.com ಮುಖಾಂತರ ದರ್ಶನದ ಟಿಕೆಟ್ ಪಡೆದುಕೊಂಡು ಬರಬೇಕು. ದರ್ಶನದ ಟಿಕೆಟಿಗೆ ಯಾವುದೇ ದರ ಇರುವುದಿಲ್ಲ.
 3. ಆನ್ಲೈನ್ನಲ್ಲಿ ದರ್ಶನದ ಟಿಕೆಟ್ ಪಡೆಯದೆ ಬಂದವರಿಗೆ ಪ್ರವೇಶವನ್ನು ನಿಷೇದಿಸಲಾಗುವುದು.
 4. ದರ್ಶನದ ಟಿಕೆಟಿನ ಪ್ರಿಂಟ್ ಔಟ್ ಖಡ್ಡಾಯವಾಗಿ ತರಬೇಕು, ಹಾಗು ದರ್ಶನದ ನಿಗದಿತ ಸಮಯಕಿಂತ 1 ಗಂಟೆ ಮುಂಚಿತವಾಗಿ ಬಂದು ತಪಾಸಣೆಗೆ ಒಳಪಡಿಸಿಕೊಳ್ಳಬೇಕು.
 5. ನಿಮ್ಮ ದರ್ಶನದ ಸಮಯ ಮೀರಿ ಬಂದಲ್ಲಿ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಪುನಃ ಶ್ರೀಕ್ಷೇತ್ರದ ವೆಬ್ಸೈಟ್ srikshetrahoranadu.com ಮುಖಾಂತರ ಅಥವಾ ಶ್ರೀಕ್ಷೇತ್ರದರ್ಶನ ಟಿಕೆಟ್ ಕೌಂಟರ್ ನಿಂದ ದರ್ಶನದ ಟಿಕೆಟ್ ಪಡೆದುಕೊಂಡು ಬರಬೇಕು.
 6. ಪುನಃ ಎರಡನೇ ಬಾರಿ ದರ್ಶನದ ಅಪೇಕ್ಷೆ ಇರುವವರು ಶ್ರೀಕ್ಷೇತ್ರದ ವೆಬ್ಸೈಟ್ srikshetrahoranadu.com ಮುಖಾಂತರ ಅಥವಾ ಶ್ರೀಕ್ಷೇತ್ರ ದರ್ಶನ ಟಿಕೆಟ್ ಕೌಂಟರ್ ನಿಂದ ದರ್ಶನದ ಟಿಕೆಟ್ ಪಡೆದುಕೊಂಡು ಬರಬೇಕು.
 7. ದೇವರ ದರ್ಶನಕ್ಕೆ ಬೆಳಗ್ಗೆ 7 ಗಂಟೆ ಇಂದ ರಾತ್ರಿ 7 ಗಂಟೆಯ  ವರೆಗೆ ಮಾತ್ರ ಅವಕಾಶ.
 8. 10 ವರ್ಷದ ಒಳಗಿನವರು ಹಾಗೂ 65 ವರ್ಷ ದಾಟಿದವರಿಗೆ ಮತ್ತು ಗರ್ಭಿಣಿಯರಿಗೆ ಖಡ್ಡಾಯವಾಗಿ  ಪ್ರವೇಶವನ್ನು   ನಿಷೇದಿಸಲಾಗಿದೆ.
 9. ಮುಖ ಕವಚವಿಲ್ಲದೆ ( MASK ) ಪ್ರವೇಶಕ್ಕೆ ಅವಕಾಶವಿರುವುದಿಲ್ಲ
 10. ಶೀತ, ಕೆಮ್ಮು,ಜೊರ, ಉಸಿರಾಟದ ತೊಂದರೆ ಇರುವವರಿಗೆ ಪ್ರವೇಶ ನಿಷಿದ್ದ .
 11. ಭಕ್ತರು ಬರುವಾಗ ತಮ್ಮ ಜೊತೆಯಲ್ಲಿ ಸ್ಯಾನಿಟೈಸರ್ ( SANITIZER )  ತರಬೇಕು. ಮತ್ತು ಹಚ್ಚಿಕೊಳ್ಳಬೇಕು.
 12. ಎಲ್ಲಾ ಭಕ್ತರುಗಳನ್ನು ಶ್ರೀಕ್ಷೇತ್ರಕ್ಕೆ ಬಂದಕೂಡಲೇ (Thermal Screening) ತಪಾಸಣೆಗೆ ಒಳಪಡಿಸಲಾಗುವುದು. ತಪಾಸಣೆಯಲ್ಲಿ ಯಾವ ವ್ಯಕ್ತಿಗಳಲ್ಲಿ ಶೀತ, ಕೆಮ್ಮು,ಜೊರ ಉಸಿರಾಟದ ತೊಂದರೆ ಇರುವುದು ಕಂಡುಬಂದರೆ ಅವರೊಂದಿಗೆ ಬಂದಂತಹ ಯಲ್ಲಾರಿಗೂ ಖಡ್ಡಾಯವಾಗಿ ಪ್ರವೇಶವನ್ನು ನಿಷೇದಿಸಲಾಗುವುದು.
 13. ಸ್ವಂತ ಅಥವಾ ಬಾಡಿಗೆ ವಾಹನದಲ್ಲಿ ಬಂದಾಗ ಅಥವಾ ಬಸ್ನಲ್ಲಿ ಬಂದಾಗ ಅದರ ಚಾಲಕ, ಕಂಡಕ್ಟರ್ ಯಾರಿಗೆ COVID-19 ನ ಲಕ್ಷಣಗಳುಕಂಡುಬಂದರೆ ಅವರೊಂದಿಗೆ ಬಂದಂತಹ ಯಲ್ಲಾರಿಗೂ ಖಡ್ಡಾಯವಾಗಿ ಪ್ರವೇಶವನ್ನು  ನಿಷೇದಿಸಲಾಗುವುದು.
 14. ದೇವಸ್ಥಾನಕ್ಕೆ ಪ್ರವೇಶ ಮಾಡುವ ಮುನ್ನ ಕೈ, ಕಾಲು, ಮುಖವನ್ನುಸೋಪಿನಿಂದ ತೊಳೆದುಕೊಂಡು, ತಪಾಸಣಾ ಗೇಟ್ ನಿಂದ ಒಳಗೆ ಪ್ರವೇಶಿಸಿ ಥರ್ಮಲ್ ಸ್ಕ್ರೀನಿಂಗ್ (Thermal Screening) ಮಾಡಿಸಿಕೊಳ್ಳಬೇಕು.
 15. ಭಕ್ತಾದಿಗಳು 6 ಅಡಿ ಸಾಮಾಜಿಕ ಅಂತರ ನಿಯಮವನ್ನು ಕಡ್ಡಾಯವಾಗಿ ಸದಾ ಪಾಲಿಸಬೇಕು.
 16. ಒಮ್ಮೆ ದೇವಸ್ಥಾನದ ಆವರಣ ಒಳಗೆ ಪ್ರವೇಶಿಸಿದ ನಂತರ ದರ್ಶನ ಹಾಗೂ  ಪ್ರಸಾದ ಬೋಜನ  ಸ್ವೀಕರಿಸಿ ಹೊರಗೆ ಹೋಗಬೇಕು, ಪುನಃ ಒಳಗೆ ಪ್ರವೇಶಕ್ಕೆ ಅವಕಾಶವಿಲ್ಲ.
 17. ದೇವರ ದರ್ಶನಕ್ಕೆ ಒಳಗೆ ಹೋಗುವ ಸಂದರ್ಭದಲ್ಲಿಯೇ ಸೇವಾಚೀಟಿಯನ್ನು ಪಡೆದುಕೊಳ್ಳಬೇಕು.
 18. ಶ್ರೀದೇವರ ಮುಂದೆ ಕೂರಿಸಿ ಅರ್ಚನೆ, ಸಮರ್ಪಣೆ ಮಾಡಿಸಲಾಗುವುದಿಲ್ಲ. ಸೇವಾದಾರರ ಪರವಾಗಿ ಅರ್ಚಕರು ಸಂಕಲ್ಪ, ಅರ್ಚನೆ ಪೂಜೆ ಮತ್ತು ಸಮರ್ಪಣೆಯನ್ನು ಮಾಡಿ ಪೂಜೆ ನೆರವೇರಿಸಲಾಗುವುದು.
 19. ಮಹಾಮಂಗಳಾರತಿಯ ಸಮಯದಲ್ಲಿ ಕಡ್ಡಾಯವಾಗಿ ಯಾರಿಗೂ ಆಲಯದ ಒಳಗೆ ಪ್ರವೇಶವಿರುವುದಿಲ್ಲ.
 20. ಸೇವಾ ಪ್ರಸಾದ ಸ್ವೀಕರಿಸುವ ಸಂದರ್ಭಲ್ಲಿ ಸೇವಾ ಚೀಟಿದಾರರಿಗೆ ಮಾತ್ರ ಅವಕಾಶ ಮತ್ತು ಸಾಮಾಜಿಕ ಅಂತರ ಕಡ್ಡಾಯ.
 21. ಸಮರ್ಪಣಾ ವಸ್ತುಗಳನ್ನುತಪಾಸಣೆಗೆ ಹಾಗೂ ಶುದ್ಧೀಕರಣಕ್ಕೆ ಒಳಪಡಿಸುವುದು ಕಡ್ಡಾಯ.
 22. ಮಡಿಲು ಅಕ್ಕಿ ಸಮರ್ಪಣೆ ಮಾಡುವ ಭಕ್ತರು ನಿಗದಿತ ಸ್ಥಾನದಲ್ಲಿ ಇಡಬೇಕು ಅದನ್ನ ಕ್ಷೇತ್ರದ ಸಿಬಂದಿಗಳು ಶುದ್ಧೀಕರಿಸಿ ಸಮರ್ಪಣೆ ಮಾಡಲಾಗುವುದು.
 23. ಭಕ್ತಾದಿಗಳು ಸೌಜನ್ಯದಿಂದ, ಸಂಯಮದಿಂದ, ಶಾಂತಮನಸ್ಸಿನಿಂದ ಶ್ರೀ ದೇವರ ದರ್ಶನವನ್ನುಪಡೆಯಬೇಕು.
 24. ಪ್ರಸಾದ ಭೋಜನ ಶಾಲೆಯಲ್ಲಿ ಸಾಮಾಜಿಕ ಅಂತರವನ್ನುಕಡ್ಡಾಯವಾಗಿ ಪಾಲಿಸಬೇಕು.
 25. ಪ್ರಸಾದ ಭೋಜನ ಶಾಲೆಯಲ್ಲಿ ಪ್ರಸಾದ ಸ್ವೀಕರಿಸಿದ ನಂತರ ಉಪಯೋಗಿಸಿದ ತಟ್ಟೆಯನ್ನು ಭಕ್ತರು ಖಡ್ಡಾಯವಾಗಿ ಸ್ವಚ್ಚವಾಗಿ ತೊಳೆದಿಡಬೇಕು.
 26. ಯಾವುದೇ ಕಾರಣಕ್ಕೂ ಯಾವ ಭಕ್ತರೂ ಕೂಡ ಮೇಲ್ಕಂಡ ನಿಯಮಗಳನ್ನು ಉಲ್ಲಂಘಿಸಬಾರದಾಗಿ ತಿಳಿಸಲು ಬಯಸುತ್ತೇವೆ.

ಮಹಾಮಂಗಳಾರತಿಯ  ಸಮಯ                                                    

ಬೆಳಿಗ್ಗೆ      –  09-00 ಗಂಟೆಗೆ

ಮಧ್ಯಾಹ್ನ   –  01-00 ಗಂಟೆಗೆ                                                                                                        

ರಾತ್ರಿ       –  08-00 ಗಂಟೆಗೆ

 

ಶ್ರೀಕ್ಷೇತ್ರಕ್ಕೆ ಬಂದು ಹೋಗಿರುವ  ಭಕ್ತರಿಗೆ ಆಕಸ್ಮಿಕವಾಗಿ ಕೊರೋನ ಸೋಂಕು ತಗುಲಿದರೆ ಶ್ರಿಕ್ಷೇತ್ರವು ಇದಕ್ಕೆ ಹೊಣೆಯಾಗಿರುವುದಿಲ್ಲ ಹಾಗೂ ಯಾವುದೇ ರೀತಿಯ ಜವಾಬ್ಧಾರಿಯೂ ಇರುವುದಿಲ್ಲ.

ಭಕ್ತರು ತಮ್ಮ ಆರೋಗ್ಯ ಹಾಗೂ ಸುರಕ್ಷತೆಯನ್ನು ಕಾಪಾಡಿಕೊಂಡು ಮೇಲೆ ತಿಳಿಸಿರುವ ಎಲ್ಲಾ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಿ ಶ್ರೀಕ್ಷೇತ್ರದೊಂದಿಗೆ ಸಹಕರಿಸಬೇಕಾಗಿ ಆಶಿಸುತ್ತೇವೆ.