
ಶ್ರೀಕ್ಷೇತ್ರ ಹೊರನಾಡಿನ ಒಳ ಅನುಭವ
Saturday, December 19th, 2015ಕಣ್ಣಳತೆಯ ಸುತ್ತಲೂ ಕಣ್ಣು ಹಾಯಿಸಿದಷ್ಟೂ ಪೂರ್ಣವೃತ್ತಾಕಾರದಲ್ಲಿ ದಿಟ್ಟವಾಗಿ ಎದ್ದು ನಿಂತ ಗುಡ್ಡ ಬೆಟ್ಟಗಳಲ್ಲಿ ದಟ್ಟವಾದ ಕಾಡು. ಕಾನನದ ಬೃಹತ್ ಕೋಟೆಯೊಳಗೆ ನಾವಿರುವ ಅನುಭವ. ಅಲ್ಲಿ ನಡೆದಾಡುತ್ತಲೇ ಮರೆತು ಹೋಗಿರುತ್ತದೆ ಭವ.ಅದೇ ಅಲ್ಲಿಯ ಮಹಾತ್ಮೆ ವೈಭವ. ತನುಮನದ ಕಣಕಣದಲ್ಲೂ ತಾನಾಗಿಯೇ ತುಂಬಿಕೊಳ್ಳುತ್ತದೆ ಭಕ್ತಿಭಾವ! ಹೌದು ನಮ್ಮ ನಾಡಿಗೆ ಕಳಶವಿಟ್ಟಂತೆ ಆ ಕ್ಷೇತ್ರ ‘ಹೊರನಾಡು’. ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿಯ ನೆಲೆಬೀಡು. ಆ ಕ್ಷೇತ್ರ ದರ್ಶನಮಾಡದವನ ಜನ್ಮವೇ ವ್ಯರ್ಥ, ಅಪೂರ್ಣ ಎಂದರೆ ತಪ್ಪಾಗಲಾರದು ನಮ್ಮ ಭಾರತದ ಪುಣ್ಯಕ್ಷೇತ್ರಗಳೇ ಹಾಗೆ. ಸುಂದರ ಪ್ರಕೃತಿ […]