ಭದ್ರಾ ನಿವಾಸ – ಶ್ರೀಕ್ಷೇತ್ರಕ್ಕೆ ಬರುವ ಭಕ್ತಾದಿಗಳ ವಸತಿ ಸೌಕರ್ಯಕ್ಕಾಗಿ ನೂತನವಾಗಿ ಭದ್ರಾನಿವಾಸ ವಸತಿಗೃಹವನ್ನು ನಿರ್ಮಿಸಲಾಗಿದ್ದು, ಈ ವಸತಿಗೃಹವು ಉನ್ನತ ದರ್ಜೆಯ ಸುವ್ಯವಸ್ಥಿತ 151 ಕೊಠಡಿ ಗಳನ್ನೊಳಗೊಂಡಿರುತ್ತದೆ. ಇದರಲ್ಲಿ 250-00 ರೂಪಾಯಿಗಳಿಂದ ರೂಮುಗಳು ಪ್ರಾರಂಭವಾಗಿ 2347-00 ರೂಪಾಯಿಗಳವರೆಗೆ ರೂಮುಗಳ ವ್ಯವಸ್ಥೆಯಿರುತ್ತದೆ. 350-00 ರೂಪಾಯಿಗಳಿಂದ ಮೇಲ್ಪಟ್ಟ ರೂಮುಗಳಲ್ಲಿ western commode toilet ವ್ಯವಸ್ಥೆಯಿರುತ್ತದೆ. 24 ಗಂಟೆಗಳು ನಿರಂತರವಾಗಿ ರೂಮುಗಳನ್ನು ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬೆಳಿಗ್ಗೆ: 05 ಗಂಟೆಯಿಂದ 08 ಗಂಟೆಯವರೆಗೆ ರೂಮಿನ ಎಡಭಾಗದ ನಲ್ಲಿಯಲ್ಲಿ ಬಿಸಿನೀರು ಬರುವ ಹಾಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರೂಮುಗಳನ್ನು ಕಾಯ್ದಿರಿಸಿದ ಭಕ್ತಾದಿಗಳು ಶ್ರೀಕ್ಷೇತ್ರಕ್ಕೆ ಬರುವ ದಿನದಂದು ತಾವು ಬರುವ ಸಮಯವನ್ನು ತಿಳಿಸಬೇಕು. ಹಾಗೆಯೇ ಭಾವಚಿತ್ರವನ್ನೊಳಗೊಂಡ ಗುರುತಿನ ಚೀಟಿಯನ್ನು ತರಬೇಕು.(ಉದಾ: ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಚುನಾವಣಾ ಗುರುತಿನ ಚೀಟಿ, ಆಧಾರ್)
Bhaktha Nivasa Lodge
ಭಕ್ತನಿವಾಸ – ದೇವಸ್ಥಾನ ಮುಖ್ಯ ರಸ್ತೆಯಲ್ಲಿ, ಖಾಸಗಿ ಬಸ್ ನಿಲ್ಧಾಣದ ಮುಂಭಾಗದಲ್ಲಿದೆ. 150 ಕೊಠಡಿಗಳನ್ನೊಳಗೊಂಡಿದ್ದು. ಭಕ್ತಾದಿಗಳ ವಸತಿಗೆ ಅನುಕೂಲವಾಗುವಂತೆ 3-4 ಬೆಡ್ ಗಳ ಕೊಠಡಿಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.