Adhishakthyathmaka Sri Annapoorneshwari Ammanavara Temple, SriKshetra Horanadu - 577 181, Chickmagalore

 

ತಾ|| 01-07-2020 ಭುದವಾರದಿಂದ ಶ್ರೀದೇವರ ದರ್ಶನ, ಪೂಜೆ, ಮತ್ತು ವಾಸ್ತವ್ಯವನ್ನು ಸಾರ್ವಜನಿಕರಿಗೆ ಪುನಃ ಪ್ರಾರಂಬಿಸಲಾಗುವುದು

ಭಕ್ತಾದಿಗಳ ಗಮನಕ್ಕೆ

ಕೊರೋನ ಮಹಾಮಾರಿಯನ್ನು ( COVID-19 ) ತಡೆಗಟ್ಟುವ ಸಲುವಾಗಿ ಸರ್ಕಾರವು ಲಾಕ್ ಡೌನ್ ವಿದಿಸಿರುವುದರಿಂದ ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರುಗಳು ಬರುವುದನ್ನು ನಿಷೇಧಿಸಲಾಗಿತ್ತು. ತಾ|| 01-07-2020 ಭುದವಾರದಿಂದ ಶ್ರೀದೇವರ ದರ್ಶನ, ಪೂಜೆ, ಮತ್ತು ವಾಸ್ತವ್ಯವನ್ನು ಸಾರ್ವಜನಿಕರಿಗೆ ಪುನಃ ಪ್ರಾರಂಬಿಸಲಾಗುವುದು. ಶ್ರೀಕ್ಷೇತ್ರಕ್ಕೆ ಬಂದು ದರ್ಶನ ಮಾಡುವವರು, ಪೂಜೆ ಮಾಡಿಸುವವರು ಹಾಗೂ ವಾಸ್ತವ್ಯದ ಅವಶ್ಯಕತೆ ಇರುವವರು ಈ ಕೆಳಗೆ ಹಾಕಿರುವ ನಿಬಂದನೆಗಳನ್ನು ಖಡ್ಡಾಯವಾಗಿ ಪಾಲಿಸಿ ನಮೊಂದಿಗೆ ಸಹಕರಿಸಬೇಕಾಗಿ ಆಶಿಸುತ್ತೇವೆ.

1. ಶ್ರೀಕ್ಷೇತ್ರಕ್ಕೆ ಬರುವ ಮೊದಲು ಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬರಬೇಕು.

2. ಶ್ರೀಕ್ಷೇತ್ರಕ್ಕೆ ಬರುವರು ಮುಂಚಿತವಾಗಿ ಶ್ರೀಕ್ಷೇತ್ರದ ವೆಬ್ಸೈಟ್ www.srikshetrahoranadu.com ಮುಖಾಂತರ ದರ್ಶನದ ಟಿಕೆಟ್ ಪಡೆದುಕೊಂಡು ಬರಬೇಕು.

3. ದರ್ಶನದ ಟಿಕೆಟಿಗೆ ಯಾವುದೇ ದರ ಇರುವುದಿಲ್ಲ.

4. ಆನ್ಲೈನ್ನಲ್ಲಿ ದರ್ಶನದ ಟಿಕೆಟ್ ಪಡೆಯದೆ ಬಂದವರಿಗೆ ಪ್ರವೇಶವನ್ನು ನಿಷೇದಿಸಲಾಗುವುದು.

5. ದರ್ಶನದ ಟಿಕೆಟಿನ ಪ್ರಿಂಟ್ ಔಟ್ ಖಡ್ಡಾಯವಾಗಿ ತರಬೇಕು, ಹಾಗು ದರ್ಶನದ ನಿಗದಿತ ಸಮಯಕಿಂತ 1 ಗಂಟೆ ಮುಂಚಿತವಾಗಿ ಬಂದು ತಪಾಸಣೆಗೆ ಒಳಪಡಿಸಿಕೊಳ್ಳಬೇಕು.

6. ನಿಮ್ಮ ದರ್ಶನದ ಸಮಯ ಮೀರಿ ಬಂದಲ್ಲಿ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಪುನಃ ಶ್ರೀಕ್ಷೇತ್ರದ ವೆಬ್ಸೈಟ್ www.srikshetrahoranadu.com ಮುಖಾಂತರ ಅಥವಾ ಶ್ರೀಕ್ಷೇತ್ರದ ದರ್ಶನ ಟಿಕೆಟ್ ಕೌಂಟರ್ ನಿಂದ ದರ್ಶನದ ಟಿಕೆಟ್ ಪಡೆದುಕೊಂಡು ಬರಬೇಕು.

7. ಪುನಃ ಎರಡನೇ ಬಾರಿ ದರ್ಶನದ ಅಪೇಕ್ಷೆ ಇರುವವರು ಶ್ರೀಕ್ಷೇತ್ರದ ವೆಬ್ಸೈಟ್ www.srikshetrahoranadu.com ಮುಖಾಂತರ ಅಥವಾ ಶ್ರೀಕ್ಷೇತ್ರದ ದರ್ಶನ ಟಿಕೆಟ್ ಕೌಂಟರ್ ನಿಂದ ದರ್ಶನದ ಟಿಕೆಟ್ ಪಡೆದುಕೊಂಡು ಬರಬೇಕು.

8. ದೇವರ ದರ್ಶನಕ್ಕೆ ಬೆಳಗ್ಗೆ 7 ಗಂಟೆ ಇಂದ ರಾತ್ರಿ 7 ಗಂಟೆಯ ವರೆಗೆ ಮಾತ್ರ ಅವಕಾಶ.

9. 10 ವರ್ಷದ ಒಳಗಿನವರು ಹಾಗೂ 65 ವರ್ಷ ದಾಟಿದವರಿಗೆ ಮತ್ತು ಗರ್ಭಿಣಿಯರಿಗೆ ಖಡ್ಡಾಯವಾಗಿ ಪ್ರವೇಶವನ್ನು ನಿಷೇದಿಸಲಾಗಿದೆ.

10. ಮುಖ ಕವಚವಿಲ್ಲದೆ ( MASK ) ಪ್ರವೇಶಕ್ಕೆ ಅವಕಾಶವಿರುವುದಿಲ್ಲ

11. ಶೀತ, ಕೆಮ್ಮು,ಜೊರ, ಉಸಿರಾಟದ ತೊಂದರೆ ಇರುವವರಿಗೆ ಪ್ರವೇಶ ನಿಷಿದ್ದ .

12. ಭಕ್ತರು ಬರುವಾಗ ತಮ್ಮ ಜೊತೆಯಲ್ಲಿ ಸ್ಯಾನಿಟೈಸರ್ ( SANITIZER ) ತರಬೇಕು. ಮತ್ತು ಹಚ್ಚಿಕೊಳ್ಳಬೇಕು.

13. ಎಲ್ಲಾ ಭಕ್ತರುಗಳನ್ನು ಶ್ರೀಕ್ಷೇತ್ರಕ್ಕೆ ಬಂದಕೂಡಲೇ (Thermal Screening) ತಪಾಸಣೆಗೆ ಒಳಪಡಿಸಲಾಗುವುದು. ತಪಾಸಣೆಯಲ್ಲಿ ಯಾವ ವ್ಯಕ್ತಿಗಳಲ್ಲಿ ಶೀತ, ಕೆಮ್ಮು,ಜೊರ ಉಸಿರಾಟದ ತೊಂದರೆ ಇರುವುದು ಕಂಡುಬಂದರೆ ಅವರೊಂದಿಗೆ ಬಂದಂತಹ ಯಲ್ಲಾರಿಗೂ ಖಡ್ಡಾಯವಾಗಿ ಪ್ರವೇಶವನ್ನು ನಿಷೇದಿಸಲಾಗುವುದು.

14. ಸ್ವಂತ ಅಥವಾ ಬಾಡಿಗೆ ವಾಹನದಲ್ಲಿ ಬಂದಾಗ ಅಥವಾ ಬಸ್ನಲ್ಲಿ ಬಂದಾಗ ಅದರ ಚಾಲಕ, ಕಂಡಕ್ಟರ್ ಯಾರಿಗೆ COVID-19 ನ ಲಕ್ಷಣಗಳುಕಂಡುಬಂದರೆ ಅವರೊಂದಿಗೆ ಬಂದಂತಹ ಯಲ್ಲಾರಿಗೂ ಖಡ್ಡಾಯವಾಗಿ ಪ್ರವೇಶವನ್ನು ನಿಷೇದಿಸಲಾಗುವುದು.

15. ದೇವಸ್ಥಾನಕ್ಕೆ ಪ್ರವೇಶ ಮಾಡುವ ಮುನ್ನ ಕೈ, ಕಾಲು, ಮುಖವನ್ನುಸೋಪಿನಿಂದ ತೊಳೆದುಕೊಂಡು, ತಪಾಸಣಾ ಗೇಟ್ ನಿಂದ ಒಳಗೆ ಪ್ರವೇಶಿಸಿ ಥರ್ಮಲ್ ಸ್ಕ್ರೀನಿಂಗ್ (Thermal Screening) ಮಾಡಿಸಿಕೊಳ್ಳಬೇಕು.

16. ಭಕ್ತಾದಿಗಳು 6 ಅಡಿ ಸಾಮಾಜಿಕ ಅಂತರ ನಿಯಮವನ್ನು ಕಡ್ಡಾಯವಾಗಿ ಸದಾ ಪಾಲಿಸಬೇಕು.

17. ಒಮ್ಮೆ ದೇವಸ್ಥಾನದ ಆವರಣ ಒಳಗೆ ಪ್ರವೇಶಿಸಿದ ನಂತರ ದರ್ಶನ ಹಾಗೂ ಪ್ರಸಾದ ಬೋಜನ ಸ್ವೀಕರಿಸಿ ಹೊರಗೆ ಹೋಗಬೇಕು, ಪುನಃ ಒಳಗೆ ಪ್ರವೇಶಕ್ಕೆ ಅವಕಾಶವಿಲ್ಲ.

18. ದೇವರ ದರ್ಶನಕ್ಕೆ ಒಳಗೆ ಹೋಗುವ ಸಂದರ್ಭದಲ್ಲಿಯೇ ಸೇವಾಚೀಟಿಯನ್ನು ಪಡೆದುಕೊಳ್ಳಬೇಕು.

19. ಶ್ರೀದೇವರ ಮುಂದೆ ಕೂರಿಸಿ ಅರ್ಚನೆ, ಸಮರ್ಪಣೆ ಮಾಡಿಸಲಾಗುವುದಿಲ್ಲ. ಸೇವಾದಾರರ ಪರವಾಗಿ ಅರ್ಚಕರು ಸಂಕಲ್ಪ, ಅರ್ಚನೆ ಪೂಜೆ ಮತ್ತು ಸಮರ್ಪಣೆಯನ್ನು ಮಾಡಿ ಪೂಜೆ ನೆರವೇರಿಸಲಾಗುವುದು.

20. ಮಹಾಮಂಗಳಾರತಿಯ ಸಮಯದಲ್ಲಿ ಕಡ್ಡಾಯವಾಗಿ ಯಾರಿಗೂ ಆಲಯದ ಒಳಗೆ ಪ್ರವೇಶವಿರುವುದಿಲ್ಲ.

21. ಸೇವಾ ಪ್ರಸಾದ ಸ್ವೀಕರಿಸುವ ಸಂದರ್ಭಲ್ಲಿ ಸೇವಾ ಚೀಟಿದಾರರಿಗೆ ಮಾತ್ರ ಅವಕಾಶ ಮತ್ತು ಸಾಮಾಜಿಕ ಅಂತರ ಕಡ್ಡಾಯ.

22. ಸಮರ್ಪಣಾ ವಸ್ತುಗಳನ್ನುತಪಾಸಣೆಗೆ ಹಾಗೂ ಶುದ್ಧೀಕರಣಕ್ಕೆ ಒಳಪಡಿಸುವುದು ಕಡ್ಡಾಯ.

23. ಮಡಿಲು ಅಕ್ಕಿ ಸಮರ್ಪಣೆ ಮಾಡುವ ಭಕ್ತರು ನಿಗದಿತ ಸ್ಥಾನದಲ್ಲಿ ಇಡಬೇಕು ಅದನ್ನ ಕ್ಷೇತ್ರದ ಸಿಬಂದಿಗಳು ಶುದ್ಧೀಕರಿಸಿ ಸಮರ್ಪಣೆ ಮಾಡಲಾಗುವುದು.

24. ಭಕ್ತಾದಿಗಳು ಸೌಜನ್ಯದಿಂದ, ಸಂಯಮದಿಂದ, ಶಾಂತಮನಸ್ಸಿನಿಂದ ಶ್ರೀ ದೇವರ ದರ್ಶನವನ್ನುಪಡೆಯಬೇಕು.

25. ಪ್ರಸಾದ ಭೋಜನ ಶಾಲೆಯಲ್ಲಿ ಸಾಮಾಜಿಕ ಅಂತರವನ್ನುಕಡ್ಡಾಯವಾಗಿ ಪಾಲಿಸಬೇಕು.

26. ಪ್ರಸಾದ ಭೋಜನ ಶಾಲೆಯಲ್ಲಿ ಪ್ರಸಾದ ಸ್ವೀಕರಿಸಿದ ನಂತರ ಉಪಯೋಗಿಸಿದ ತಟ್ಟೆಯನ್ನು ಭಕ್ತರು ಖಡ್ಡಾಯವಾಗಿ ಸ್ವಚ್ಚವಾಗಿ ತೊಳೆದಿಡಬೇಕು.

27. ಯಾವುದೇ ಕಾರಣಕ್ಕೂ ಯಾವ ಭಕ್ತರೂ ಕೂಡ ಈ ಮೇಲ್ಕಂಡ ನಿಯಮಗಳನ್ನು ಉಲ್ಲಂಘಿಸಬಾರದಾಗಿ ತಿಳಿಸಲು ಬಯಸುತ್ತೇವೆ.

ಮಹಾಮಂಗಳಾರತಿಯ ಸಮಯ

ಬೆಳಿಗ್ಗೆ – 09-00 ಗಂಟೆಗೆ
ಮಧ್ಯಾಹ್ನ – 01-00 ಗಂಟೆಗೆ
ರಾತ್ರಿ – 08-00 ಗಂಟೆಗೆ

ಶ್ರೀಕ್ಷೇತ್ರಕ್ಕೆ ಬಂದು ಹೋಗಿರುವ ಭಕ್ತರಿಗೆ ಆಕಸ್ಮಿಕವಾಗಿ ಕೊರೋನ ಸೋಂಕು ತಗುಲಿದರೆ ಶ್ರಿಕ್ಷೇತ್ರವು ಇದಕ್ಕೆ ಹೊಣೆಯಾಗಿರುವುದಿಲ್ಲ ಹಾಗೂ ಯಾವುದೇ ರೀತಿಯ ಜವಾಬ್ಧಾರಿಯೂ ಇರುವುದಿಲ್ಲ.

ಭಕ್ತರು ತಮ್ಮ ಆರೋಗ್ಯ ಹಾಗೂ ಸುರಕ್ಷತೆಯನ್ನು ಕಾಪಾಡಿಕೊಂಡು ಮೇಲೆ ತಿಳಿಸಿರುವ ಎಲ್ಲಾ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಿ ಶ್ರೀಕ್ಷೇತ್ರದೊಂದಿಗೆ ಸಹಕರಿಸಬೇಕಾಗಿ ಆಶಿಸುತ್ತೇವೆ.

ಶ್ರೀಮಾತೆಯ ಸೇವೆಯಲ್ಲಿ ಅಂಬಾಚರಣದಾಸ ಡಾ|| ಜಿ ಭೀಮೇಶ್ವರ ಜೋಷಿ